ಸೋಮವಾರ, ನವೆಂಬರ್ 19, 2012

ಸೂರ್ಯನಿಗೆ ಮೈ ಒಡ್ಡಿರುವ ಹಳದಿ ಹೂ (Yellow Pansy)

 
    
      ರಾತ್ರಿಯ ಚಳಿಯಲ್ಲಿ ಕಳೆದುಕೊಂಡ ಶಕ್ತಿಯನ್ನು  ಬೆಳಗಿನ ಸೂರ್ಯನಿಂದ ಮರಳಿ ಪಡೆಯುತ್ತಿರುವ ಹಳದಿ ಹೂ (Yellow Pansy) ಕ್ಯಾಮೆರ ಕಣ್ಣಿಗೆ ಸಿಕ್ಕಿದ್ದು ಕುಶಾಲನಗರ ಸಮೀಪದ ಬೆಟ್ಟದ ತುಂಗ ಎಂಬ ಹಳ್ಳಿಯಲ್ಲಿ. ಚಿಟ್ಟೆಗಳು ಹಾರಾಡಲು ಶಕ್ತಿಯ ಅವಶ್ಯಕತೆ ಇರುತ್ತದೆ. ರಾತ್ರಿಯ ಇಬ್ಬನಿಯಿಂದ ಒದ್ದೆಯಾದ ರೆಕ್ಕೆಗಳು ಒಣಗಲು ಇದು ಸಹಾಯಕಾರಿ.

ಮೊಟ್ಟೆಯಿಡುತ್ತಿರುವ ಪಯೊನೀರ್

    
     ಮೊಟ್ಟೆಯಿಡುತ್ತಿರುವ ಪಯೊನೀರ್ ಕ್ಯಾಮೆರ ಕಣ್ಣಿಗೆ ಸಿಕ್ಕಿದ್ದು ಕುಶಾಲನಗರ ಸಮೀಪದ ಬೆಟ್ಟದ ತುಂಗ ಎಂಬ ಹಳ್ಳಿಯಲ್ಲಿ. ಮೊಟ್ಟೆಗಳನ್ನು ರಕ್ಷಿಸಿಕೊಳ್ಳಲು ಮುಳ್ಳಿರುವ  ಗಿಡವನ್ನು ಆಯ್ಕೆ ಮಾಡಿಕೊಂಡಿರಬಹುದು.  ಮೊಟ್ಟೆಯಿಂದ ಹೊರಬಂದ ಕಂಬಳಿಹುಳುಗಳಿಗೆ ಆಹಾರವಾಗುವಂತ  ಗಿಡಗಳನ್ನೆ ಹುಡುಕಿ ಮೊಟ್ಟೆಯಿಡುವುದು ವಾಡಿಕೆ.  


      ರೆಕ್ಕೆ ಹರಡಿದಾಗ ಬಿಳಿ ಚಿಟ್ಟೆಗಳಂತೆ ಕಾಣುವ ಪಯೋನೀರ್ಗಳು ಮುಚ್ಚಿದಾಗ ಹಳದಿಯನ್ನೂ ಕಾಣಬಹುದು.

ಕಾಡಿನ ಜ್ವಾಲೆ - ಮುತ್ತುಗ